• 8 years ago
'ಟಗರು' ಚಿತ್ರದ ಟೀಸರ್ ರಿಲೀಸ್ ಮಾಡಲಿದ್ದಾರೆ ಶಿವಣ್ಣನ ಅಭಿಮಾನಿಗಳು!
ಶಿವರಾಜ್ ಕುಮಾರ್ ನಟನೆಯ 'ಟಗರು' ಸಿನಿಮಾದ ಟೀಸರ್ ಬಿಡುಗಡೆಯ ಕಾರ್ಯಕ್ರಮಕ್ಕೆ ಸಖತ್ ಪ್ಲಾನ್ ಗಳು ಸಾಲು ಸಾಲಾಗಿ ರೆಡಿಯಾಗಿವೆ.
ಸಾಮಾನ್ಯವಾಗಿ ಚಿತ್ರದ ಟೀಸರ್ ರಿಲೀಸ್ ಕಾರ್ಯಕ್ರಮಗಳನ್ನು ಚಿತ್ರತಂಡವೇ ಮಾಡುತ್ತದೆ. ಆದರೆ 'ಟಗರು' ಚಿತ್ರದ ಟೀಸರ್ ರಿಲೀಸ್ ಕಾರ್ಯಕ್ರಮದ ಆಯೋಜನೆಯನ್ನು ಶಿವಣ್ಣನ ಅಭಿಮಾನಿಗಳು ಮಾಡಿದ್ದಾರೆ. 'ರಾಜ್ ಡೈನಾಸ್ಟಿ' ಮತ್ತು 'ಶಿವು ಅಡ್ಡ' ತಂಡಗಳು 'ಟಗರು' ಟೀಸರ್ ಬಿಡುಗಡೆ ಕಾರ್ಯಕ್ರವನ್ನು ನಡೆಸಲಿದೆ.
ಕಾರ್ಯಕ್ರಮದಲ್ಲಿ ಅಣ್ಣಾವ್ರ ಮೂರು ಮಕ್ಕಳು ಹಾಜರಾಗುತ್ತಾರೆ. ರಾಘವೇಂದ್ರ ರಾಜ್ ಕುಮಾರ್ ಮತ್ತು ಪುನೀತ್ ರಾಜ್ ಕುಮಾರ್ ಕಾರ್ಯಕ್ರಮಕ್ಕೆ ಬಂದು ಶಿವಣ್ಣನಿಗೆ ಶುಭ ಹಾರೈಸಲಿದ್ದಾರೆ. 'ಟಗರು' ಟೀಸರ್ ರಿಲೀಸ್ ಕಾರ್ಯಕ್ರಮ ನವೆಂಬರ್ 7ಕ್ಕೆ ಟೌನ್ ಹಾಲ್ ನಲ್ಲಿ ಸಂಜೆ 6 ಗಂಟೆಗೆ ನೆರವೇರಲಿದೆ.
Shivaraj kumar's fans will release teaser of 'Tagaru'.Usually the movie team only conducting the film teaser releases.But fans of Shivanna have made the teaser release program of 'tagaru'. .watch this video

Recommended