ಸೀರೆ ಎಂದಾಕ್ಷಣ ಥಟ್ ಅಂತ ಹೆಣ್ಮಕ್ಳ ಬಾಯಲ್ಲಿ ಬರೋದು ಬನಾರಸ್ ಸೀರೆ, ಮೈಸೂರು ಸಿಲ್ಕ್, ಕಾಂಜೀವರಂ ಸೀರೆ ಹೀಗೆ ನಾನಾ ವೆರೈಟಿ ಫ್ಯಾಷನ್ ಸೀರೆಗಳು. ಈ ಸೀರೆಗಳು ಹೆಣ್ಮಕ್ಳಗೆ ಅಂದ ಚೆಂದವನ್ನು ಹೆಚ್ಚಿಸುತ್ತವೆ. ಆದ್ರೆ, ಇವೆಲ್ಲವುಗಳಿಗಿಂತ ವಿಭಿನ್ನ ರೀತಿಯ ಅಂದಗಾತಿಯರ ಅಂದವನ್ನು ಮತ್ತಷ್ಟು ಹೆಚ್ಚಿಸುವ ಸೀರೆ ಅಂದ್ರೆ ಕೈಮಗ್ಗದ ಸೀರೆಗಳು.ಹೌದು, ಕೈಮಗ್ಗದ ಸೀರೆಗಳು ಇತ್ತೀಚೆಗೆ ಮಾಸಿ ಮೂಲೆ ಸೇರಿದಬಹುದು. ಆದರೆ, ಆ ಸೀರೆಗಳ ಬಾಳಿಕೆ, ಅವುಗಳ ಗಮ್ಮತ್ತು ಮಾತ್ರ ಇನ್ನೂ ಮಾಸಿಲ್ಲ. ಇಂತಹ ಕೈಮಗ್ಗದ ಸೀರೆಗಳು ನಿಮಗೆ ಬೇಕಪ್ಪ ಅಂದ್ರೆ ಈಗ ಧರ್ಮಸ್ಥಳಕ್ಕೆ ಹೋದರೆ ಸಿಗುತ್ತವೆ.ಧರ್ಮಸ್ಥಳದಲ್ಲಿ ನಡೆಯುತ್ತಿರುವ ಲಕ್ಷದೀಪೋತ್ಸವದಲ್ಲಿ ಕೈಮಗ್ಗದ ಸೀರೆಗಳು ಮಹಿಳೆಯರನ್ನು ಆಕರ್ಷಿಸುತ್ತಿವೆ. ನೇಕಾರರದಿಂದ ನೇರವಾಗಿ ನಾರಿಯರಿಗೆ ಕೈಮಗ್ಗದ ಸೀರೆಗಳನ್ನು ಮಾರಾಟ ಮಾಡಲಾಗುತ್ತಿದೆ.ಲಕ್ಷ ದೀಪೋತ್ಸವದ ಐದನೇ ದಿನದಿಂದ ಸಿಲ್ಕ್ ಮತ್ತು ಕಾಟನ್ ಸೀರೆಗಳಿಗೆ ಬೇಡಿಕೆ ಹೆಚ್ಚಾಯಿತು. ಆರಂಭದಲ್ಲಿ ಮಾರಾಟ ಅಷ್ಟೇನೂ ಆಶಾದಾಯಕವಾಗಿರಲಿಲ್ಲ. ಮೊದಲ ಮೂರ್ನಾಲ್ಕು ದಿನಗಳ ಅವಧಿಯಲ್ಲಿ ಉಳಿದ ಮಳಿಗಗಳಲ್ಲಿದ್ದಂತೆ ಕೈಮಗ್ಗದ ಸೀರೆ ಮಳಿಗೆಯಲ್ಲಿ ಜನಜಂಗುಳಿಯಿರಲಿಲ್ಲ. ಗುರುವಾರದಿಂದ ಹಲವರು ಈ ಸೀರೆಗಳೆಡೆಗೆ ಆಕರ್ಷಿತರಾದ
Category
🗞
News