• 7 years ago
ಬಾಲಿವುಡ್ ನ ಖ್ಯಾತ ನಟಿ ಕಾಜೋಲ್ ಇಂದು (ನವೆಂಬರ್ 30) ಹುಬ್ಬಳ್ಳಿಯ ಸಿದ್ಧಾರೂಢ ಮಠಕ್ಕೆ ಬೇಟಿ ನೀಡಿದ್ದಾರೆ. ಕಾಜೋಲ್ ಜೊತೆಯಲ್ಲಿ ತಾಯಿ ತನುಜಾ ಮುಖರ್ಜಿ, ತಂಗಿ ತನಿಷಾ, ಹಾಗೂ ಕಾಜೋಲ್ ಪುತ್ರ ಯುಗ್ ಕೂಡ ಆಗಮಿಸಿ ಪೂಜೆ ಸಲ್ಲಿಸಿದ್ದಾರೆ. ಸಿದ್ಧಾರೂಢ ಸ್ವಾಮೀಜಿಗಳ ಗದ್ದುಗೆಯ ದರ್ಶನ ಪಡೆಯುವುದರ ಜೊತೆಗೆ ಕಾಜೋಲ್ ಕುಟುಂಬದ ವತಿಯಿಂದ ಗದ್ದುಗೆಗೆ ವಿಶೇಷ ಅಭಿಷೇಕವನ್ನು ಮಾಡಿಸಲಾಯಿತು. Loading ad ಪೂಜೆ ಸಲ್ಲಿಸಿದ ನಂತರ ಕೆಲವು ನಿಮಿಷಗಳು ನಟಿ ಕಾಜೋಲ್ ಗದ್ದುಗೆಯ ಬಳಿ ಧ್ಯಾನ ಮಾಡಿದ್ದಾರೆ. ಮಠದ ದರ್ಶನಕ್ಕಾಗಿ ವಿಶೇಷ ವಿಮಾನದಲ್ಲಿ ಕಾಜೋಲ್ ಮತ್ತು ಕುಟುಂಬಸ್ಥರು ಹುಬ್ಬಳ್ಳಿಗೆ ಆಗಮಿಸಿದ್ದರು. ಆದರೆ ಇದೇ ಮೊದಲ ಬಾರಿಗೆ ನಟಿ ಕಾಜೋಲ್ ಸಿದ್ಧಾರೂಢ ಮಠಕ್ಕೆ ಬೇಟಿ ನೀಡಿ ಗದ್ದುಗೆಯ ದರ್ಶನ ಪಡೆದಿದ್ದಾರೆ. ಕಾಜೋಲ್ ಸಿದ್ಧಾರೂಢ ಮಠಕ್ಕೆ ಬೇಟಿ ನೀಡಿದ ವಿಷಯ ತಿಳಿದ ಮೇಲೆ ಅಪಾರ ಸಂಖ್ಯೆಯ ಅಭಿಮಾನಿಗಳು ಮಠದ ಬಳಿ ಜಮಾಯಿಸಿದ್ದರು.
Bollywood actress Kajol devgan visits Siddarud mutt in Hubballi. Kajol visits the mutt with her sister Tanisha Mukerji and son Yogi

Recommended