ನಿರೀಕ್ಷೆಯಂತೆಯೇ ಭಾರತದಲ್ಲಿ ಶಿಯೋಮಿ ರೆಡ್ ಮಿ ನೋಟ್ 5 ಸ್ಮಾರ್ಟ್‌ಫೋನ್ ಇಂದು ಬಿಡುಗಡೆಯಾಗಿದೆ.! ರೆಡ್ ಮಿ ನೋಟ್ 4 ಯಶಸ್ಸನ್ನು ಮತ್ತೆ ಪಡೆಯಲು ಶಿಯೋಮಿ ರೆಡ್ ಮಿ ನೋಟ್ 5 ಅನ್ನು ಭಾರತದಲ್ಲಿಯೇ ಮೊದಲು ಬಿಡುಗಡೆ ಮಾಡಿ ವಿಶ್ವ ಮೊಬೈಲ್ ಮಾರುಕಟ್ಟೆಗೆ ಶಿಯೋಮಿ ಶಾಕ್ ನೀಡಿದೆ.!!ಭಾರತದಲ್ಲಿಯೇ ಮೊದಲು ನೇರವಾಗಿ ಲಾಂಚ್ ಆದ ಮೊದಲ ಸ್ಮಾರ್ಟ್‌ಫೋನ್ ಇದಾಗಿದ್ದು, ಇದು ಶಿಯೋಮಿ ಬಿಡುಗಡೆಮಾಡಿರುವ ಈ ವರ್ಷದ ಮೊದಲ ಸ್ಮಾರ್ಟ್‌ಫೋನ್ ಕೂಡ ಆಗಿದೆ.! ಅತ್ಯಂತ ಕಡಿಮೆ ಬೆಲೆಯಲ್ಲಿ ಶಿಯೋಮಿ ರೆಡ್ ಮಿ ನೋಟ್ 5 ಸ್ಮಾರ್ಟ್‌ಫೋನ್ ಬಿಡುಗಡೆ ಮಾಡಿದ್ದು, ಹಾಗಾದರೆ, ರೆಡ್ ಮಿ ನೋಟ್ 5 ಫೋನ್ ಫೀಚರ್ಸ್ ಯಾವುವು? ಬೆಲೆ ಎಷ್ಟು ಎಂಬುದನ್ನು ಮುಂದೆ ತಿಳಿಯಿರಿ.!!ಶಿಯೋಮಿ ರೆಡ್ ಮಿ ನೋಟ್ 5 ಅತ್ಯಂತ ಕಡಿಮೆ ಬೆಲೆಗೆ ಮಾರುಕಟ್ಟೆಗೆ ಕಾಲಿಟ್ಟಿದ್ದು, 3GB RAM ಮತ್ತು 32GB ಮೆಮೊರಿ ವೆರಿಯಂಟ್ ಫೋನ್ ಬೆಲೆ ಕೇವಲ 9,999 ರೂಪಾಯಿಗಳಾಗಿದೆ. ಇನ್ನು 4GB ಮತ್ತು 64GB ಮೆಮೊರಿಯಂಟ್ ರೆಡ್ ಮಿ ನೋಟ್ 5 ಬೆಲೆ 11,999 ರೂಪಾಯಿಗಳಿಗೆ ಬಿಡುಗಡೆಗೊಂಡಿದೆ.!!
Category
🤖
Tech