• 7 years ago
ನಮ್ಮ ಸಮಾಜ ಒಬ್ಬ ಕೊಲೆಗಾರನನ್ನ ಒಪ್ಪಿಕೊಳ್ಳುತ್ತೆ, ಒಬ್ಬ ನಿರ್ದಯಿ ಅತ್ಯಾಚಾರಿಯನ್ನ ಕ್ಷಮಿಸುತ್ತೆ... ಆದರೆ ಯಾವ ತಪ್ಪನ್ನೂ ಮಾಡದ ನಮ್ಮನ್ನು ಮಾತ್ರ ಬದುಕಿರುವವರೆಗೂ ತಿರಸ್ಕಾರದ ಕಣ್ಣಲ್ಲೇ ನೋಡೋದು ಸರೀನಾ..?" ಭಾರತದ ಪ್ರಪ್ರಥಮ ಟ್ರಾನ್ಸ್ ಜೆಂಡರ್ ರೇಡಿಯೋ ಜಾಕಿ ಎಂಬ ಪ್ರಶಂಸೆಗೆ ಪಾತ್ರರಾದ ಪ್ರಿಯಾಂಕ ಅವರ ಈ ಪ್ರಶ್ನೆಗೆ ಸಮಾಜದ ಬಳಿ ಖಂಡಿತ ಉತ್ತರವಿರಲಿಕ್ಕಿಲ್ಲ! ಹೌದು, ಗಂಡಾಗಿ ಹುಟ್ಟಿ, ಹೆಣ್ಮನಸ್ಸಿನೊಂದಿಗೆ ಬೆಳೆದು, ಕೊನೆಗೆ ಸಂಪೂರ್ಣ ಹೆಣ್ಣಾಗಿ ಪರಿವರ್ತನೆಗೊಂಡ ಪ್ರಿಯಾಂಕ ಅವರ ಬದುಕಿನ ಪಯಣವನ್ನೊಮ್ಮೆ ಅವಲೋಕಿಸಿದರೆ, ಈ ಲಿಂಗ ಅಲ್ಪಸಂಖ್ಯಾತರ ಬದುಕಿನ ಬವಣೆಯ ಕುರಿತು ಕೊಂಚವಾದರೂ ಅರಿವಾದೀತು. ಪ್ರಪ್ರಥಮ ಮಹಿಳಾ ಆರ್ಜೆಯಾಗಿ, ರೇಡಿಯೋ ಜರ್ನಲಿಸ್ಟ್ ಆಗಿ, ಪ್ರೋಗ್ರಾಂ ಎಗ್ಸಿಕ್ಯೂಟಿವ್ ಆಗಿ, ತೃತೀಯ ಲಿಂಗಿಗಳ ಸಮುದಾಯದ ಧ್ವನಿಯಾಗಿದ್ದಾರೆ ಪ್ರಿಯಾಂಕಾ. ತಮಗೆ ಸಿಕ್ಕ ಅವಕಾಶವನ್ನೆಲ್ಲ ಸಮರ್ಥವಾಗಿ ಬಳಸಿಕೊಳ್ಳುತ್ತಿರುವ ಪ್ರಿಯಾಂಕಾ ತೃತೀಯ ಲಿಂಗಿಗಳಿಗೆ ಸರ್ಕಾರದಿಂದ ಸಿಗಬೇಕಾದ ಸೌಲಭ್ಯದ ಕುರಿತು, ಅವಕಾಶದ ಕುರಿತು, ಸಮಾಜದಿಂದ ಸಿಗಬೇಕಾದ ಗೌರವ-ಆದರದ ಕುರಿತು, ಆರೋಗ್ಯದ ಅರಿವಿನ ಕುರಿತು ನಿರಂತರವಾಗಿ ಕಾರ್ಯಕ್ರಮಗಳನ್ನು ಮಾಡುವ ಮೂಲಕ ಸಮಾಜ ಅಂಥವರನ್ನು ನೋಡುವ ದೃಷ್ಟಿಕೋನ ಬದಲಾಗುವಂತೆ ಮಾಡುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದಾರೆ.

Category

🗞
News

Recommended