• 4 years ago
ಥೈರಾಯ್ಡ್ ಸಮಸ್ಯೆ ಎನ್ನುವುದು ಇತ್ತೀಚಿಗೆ ಹೆಚ್ಚಾಗುತ್ತದೆ. ಪುರುಷ ಹಾಗೂ ಮಹಿಳೆಯರಲ್ಲಿ ಈ ಸಮಸ್ಯೆ ಕಂಡು ಬರುತ್ತಿದ್ದು ಇದಕ್ಕೆ ಪ್ರಮುಖ ಕಾರಣ ಜೀವನಶೈಲಿ. ಥೈರಾಯ್ಡ್ ಎನ್ನುವುದು ನಮ್ಮ ದೇಹದ ಗಂಟಲಿನಲ್ಲಿ ಉತ್ಪತ್ತಿಯಾಗುವ ಹಾರ್ಮೋನ್‌ ಆಗಿದೆ. ದೇಹದಲ್ಲಿ ಚಯಾಪಚಯ ಕ್ರಿಯೆ ಸರಿಯಾಗಿ ನಡೆಯಲು ಥೈರಾಯ್ಡ್ ಹಾರ್ಮೋನ್‌ ತುಂಬಾ ಮುಖ್ಯ. ಈ ಹಾರ್ಮೋನ್ ಉತ್ಪತ್ತಿಯಲ್ಲಿ ಹೆಚ್ಚಾದರೆ ಹೈಪರ್ ಥೈರಾಯ್ಡ್ ಉಂಟಾಗುತ್ತದೆ, ಕಡಿಮೆಯಾದರೆ ಹೈಪೋ ಥೈರಾಯ್ಡ್ ಉಂಟಾಗುತ್ತದೆ. ಥೈರಾಯ್ಡ್ ಸಮಸ್ಯೆಗೆ ಪ್ರಮುಖ ಕಾರಣ ಮಾನಸಿಕ ಒತ್ತಡ, ಅನಾರೋಗ್ಯಕರ ಆಹಾರ ಶೈಲಿ, ವ್ಯಾಯಾಮ ಮಾಡದಿರುವುದು. ಇಲ್ಲಿ ಕೆಲವೊಂದು ಟಿಪ್ಸ್ ನೀಡಲಾಗಿದೆ. ಇವುಗಳನ್ನು ಪಾಲಿಸಿದರೆ ಥೈರಾಯ್ಡ್ ಸಮಸ್ಯೆ ಉಂಟಾಗುವುದನ್ನು ತಡೆಗಟ್ಟಬಹುದು.

Recommended