• 5 years ago
ಇಷ್ಟವಾದ ತಿಂಡಿ ಕಣ್ಣ ಮುಂದೆಯೇ ಇದೆ. ಹೊಟ್ಟೆ ಬೇರೆ ತುಂಬಾ ಹಸಿದಿದೆ. ಎಲ್ಲೋ ಹೋಗುವ ಆತುರ ಕೂಡ ಇದೆ. ಆದಷ್ಟು ಬೇಗನೆ ತಿಂಡಿ ತಿಂದು ಒಂದು ಕಪ್ ಕಾಫಿ ಕುಡಿದು ಹೊರಡೋಣ ಎಂದು ಮನಸ್ಸಿನಲ್ಲೇ ಲೆಕ್ಕಾ ಹಾಕುತ್ತ ಇರುವಾಗಲೇ ಯಾರ ಬಳಿಯೋ ಮಾತನಾಡಿಕೊಂಡು ಅಥವಾ ತುಂಬಾ ಬೇಗನೆ ಹೊರಡಬೇಕೆಂಬ ಆತುರದಿಂದ ತಿನ್ನುತ್ತಿರಬೇಕಾದರೆ ಹಠಾತ್ತನೆ ಬಾಯಿಯೊಳಗೆ ಸಿಡಿಲು ಬಡಿದಂತಹ ಅನುಭವ. ನೋಡಿದರೆ ತಿನ್ನುವ ಆತುರದಲ್ಲಿ ನಾಲಿಗೆ ಕಡಿದುಕೊಂಡಿರುತ್ತೀರಿ. ಇಂತಹ ಸಂದರ್ಭ ಖಂಡಿತ ನಿಮಗೆ ಒಂದಲ್ಲ ಒಂದು ಕ್ಷಣ ಎದುರಾಗಿರುತ್ತದೆ ಅಲ್ಲವೇ? ಹೊಟ್ಟೆಗೆ ಆಹಾರ ತನ್ನ ಪಾಡಿಗೆ ಹೋಗುತ್ತಿದ್ದರೆ, ಕಣ್ಣಂಚಿನಲ್ಲಿ ಸಣ್ಣ ಹನಿಗಳು ಅವುಗಳ ಪಾಡಿಗೆ ಅವು ಜಿನುಗುತ್ತಿರುತ್ತವೆ. ಏಕೆಂದರೆ ಅಷ್ಟು ನೋವು ಕೊಡುತ್ತದೆ ಈ ನಾಲಿಗೆ ಕಚ್ಚಿಕೊಂಡಿರುವುದು. ಹೇಳುವುದಕ್ಕೂ ಆಗುವುದಿಲ್ಲ, ಬಿಡುವುದಕ್ಕೂ ಆಗುವುದಿಲ್ಲ. ಇಂತಹ ಸಮಸ್ಯೆ ಎದುರಾದಾಗ ಏನು ಮಾಡಬೇಕು ಎಂಬುದನ್ನು ಇಲ್ಲಿ ನೀಡಿದ್ದೇವೆ.

Recommended