• 4 years ago
ಶರೀರದಲ್ಲಿ ಕೂದಲು ದೇಹದ ಕೆಲವೊಂದು ಖಾಸಗಿ ಭಾಗಗಳಲ್ಲಿ ಬೆಳೆಯುತ್ತದೆ. ಈ ಕೂದಲನ್ನು ತೆಗೆಯಬೇಕೆ, ಬೇಡ್ವೆ ? ಎನ್ನುವುದು ಪ್ರತಿಯೊಬ್ಬರ ವೈಯಕ್ತಿಕ ವಿಷಯವಾಗಿದೆ. ಆದರೆ ಇಲ್ಲಿ ನಾವು ಆ ಕೂದಲನ್ನು ತೆಗೆಯ ಬಯಸುವುದಾದರೆ ಬೇಡದ ಕೂದಲನ್ನು ತೆಗೆಯಲು ಶೇವಿಂಗ್ ಹೊರತು ಪಡಿಸಿ ಬೇರೇ ಯಾವೆಲ್ಲಾ ವಿಧಾನಗಳಿವೆ ಎಂಬುವುದರ ಬಗ್ಗೆ ಹೇಳಲಾಗಿದೆ. ಸ್ಲೀವ್‌ಲೆಸ್‌ ಡ್ರೆಸ್‌, ಬಿಕಿನಿ ಈ ರೀತಿಯ ಉಡುಗೆಗಳನ್ನು ತೊಟ್ಟಾಗ ಆ ಭಾಗಗಳನ್ನು ಸ್ವಚ್ಛವಾಗಿಡಬೇಕು. ಇನ್ನು ಬೇಡದ ಕೂದಲನ್ನು ತೆಗೆಯುವುದರಿಂದ ಸ್ವಚ್ಛತೆ ಕಡೆ ಹೆಚ್ಚಿನ ಗಮನ ಕೊಟ್ಟಂತೆ ಆಗುವುದು. ಬೇಡದ ಕೂದಲನ್ನು ತೆಗೆಯಲು ಹೆಚ್ಚಿನವರು ಶೇವಿಂಗ್‌ ಮೊರೆ ಹೋದರೆ, ಮತ್ತೆ ಕೆಲವರು ವ್ಯಾಕ್ಸಿಂಗ್ ಮಾಡಿಸಿಕೊಳ್ಳುತ್ತಾರೆ. ಇಲ್ಲಿ ಬೇಡದ ಕೂದಲನ್ನು ತೆಗೆಯಲು ಬಳಸುವ ಜನಪ್ರಿಯವಾದ ವಿಧಾನಗಳ ಬಗ್ಗೆ ಹೇಳಲಾಗಿದೆ. ಖಾಸಗಿ ಜಾಗದಲ್ಲಿ ಕೂದಲನ್ನು ತೆಗೆಯುವುದು ಸ್ವಲ್ಪ ರಿಸ್ಕಿ ಕೂಡ ಆಗಿರುವುದರಿಂದ ಇವುಗಳಲ್ಲಿ ನಿಮಗೆ ಕಂಫರ್ಟ್ ಆದ ವಿಧಾನಗಳನ್ನು ಅನುಸರಿಸಬಹುದು ನೋಡಿ.

Recommended