• 4 years ago
ಕುಟುಂಬ ಎಂಬ ಪರಿಕಲ್ಪನೆಯೇ ಸುಂದರ. ಮಗುವಿಗೆ ಮನೆಯೇ ಪಾಠ ಶಾಲೆ ಅಂತಾರೆ. ಒಂದು ಮಗು ಬೆಳೆದು ದೊಡ್ಡದಾಗುವಾಗ ಆ ವ್ಯಕ್ತಿಯ ವ್ಯಕ್ತಿತ್ವದ ಮೇಲೆ ಕುಟುಂಬ ಬೀರುವ ಪ್ರಭಾವವು ದೊಡ್ಡದಾಗಿರುತ್ತದೆ. ಭಾರತದಲ್ಲಿ ಹಿಂದೆಯೆಲ್ಲಾ ಕೂಡು ಕುಟುಂಬ ಅಂದರೆ ಅವಿಭಕ್ತ ಕುಟುಂಬಗಳೇ ಹೆಚ್ಚಾಗಿದ್ದೆವು. ಆದರೆ ಆಧುನಿಕತೆ ಬೆಳೆದಂತೆ ಕುಟುಂಬದ ಚಿತ್ರಣವೇ ಬದಲಾಗುತ್ತಾ ಬಂತು. ಕೂಡು ಕುಟುಂಬದ ಬದಲು ಸಣ್ಣ ಕುಟುಂಬಗಳು ಹೆಚ್ಚಾದವು. ಒಂದು ಕುಟುಂಬ ಎಂದರೆ ಗಂಡ-ಹೆಂಡತಿ ಮಕ್ಕಳು ಅವರಷ್ಟೇ ಎಂಬಂತಾಯಿತು. ಇದೀಗ ನಮ್ಮಲ್ಲಿ ಸಣ್ಣ ಕುಟುಂಬಗಳೇ ಹೆಚ್ಚಾಗಿವೆ. ಹಾಗಂತ ಈ ಸಣ್ಣ ಕುಟುಂಬದಲ್ಲಿ ಕೂಡು ಕುಟುಂಬದ ಸಂತೋಷ ಕಾಣಲು ಸಾಧ್ಯವೇ? ಖಂಡಿತ ಇಲ್ಲ... ಇದು ಅವಿಭಕ್ತ ಕುಟುಂಬದಲ್ಲಿದ್ದು ಇದೀಗ ಸಣ್ಣ ಕುಟುಂಬದಲ್ಲಿರುವವರಿಗೆ ತಾವೇನು ಮಿಸ್‌ ಮಾಡುತ್ತಿದ್ದೇವೆ ಎಂಬುವುದರ ಅರಿವು ಉಂಟಾಗಿರುತ್ತದೆ. ಸಣ್ಣ ಕುಟುಂಬ ಆರ್ಥಿ ಕ ಹಾಗೂ ಖಾಸಗಿಯನದ ದೃಷ್ಟಿಯಿಂದ ನೋಡುವುದಾದರೆ ಒಳ್ಳೆಯದು ಎನಿಸಬಹುದು. ಆದರೆ ಅಲ್ಲಿ ಕೂಡು ಕುಟುಂಬದಲ್ಲಿ ಸಿಗುವ ಖುಷಿ ಹಾಗೂ ಅನುಭವದ ಪಾಠ ಸಿಗಲು ಸಾಧ್ಯವೇ? ಇಲ್ಲಿ ನಾವು ಕೂಡು ಕುಟುಂಬದ ಪ್ರಯೋಜಗಳು ಹಾಗೂ ಉಂಟಾಗುವ ತೊಂದರೆಗಳ ಬಗ್ಗೆ ಹೇಳಿದ್ದೇವೆ ನೋಡಿ:

Recommended