• 4 years ago
ಭಾರತದಲ್ಲಿ ಸ್ಕೋಡಾ ಆಕ್ಟೇವಿಯಾ ಆರ್‌ಎಸ್ 245 ಕಾರಿನ ವಿತರಣೆ ಆರಂಭವಾಗಿದೆ. ಬೆಂಗಳೂರು ಸೇರಿದಂತೆ ಕೆಲವು ನಗರಗಳಲ್ಲಿ ಲಾಕ್‌ಡೌನ್ ಸಡಿಲಗೊಳಿಸಿರುವ ಕಾರಣಕ್ಕೆ
ಸ್ಕೋಡಾ ಕಂಪನಿಯು ತನ್ನ ಪರ್ಫಾಮೆನ್ಸ್ ಸೆಡಾನ್ ಕಾರಿನ ವಿತರಣೆಯನ್ನು ಆರಂಭಿಸಿದೆ.

ಭಾರತಕ್ಕಾಗಿ ನಿಗದಿಪಡಿಸಿದ ಒಟ್ಟು 200 ಯುನಿಟ್‌ಗಳಲ್ಲಿ 44 ಬೆಂಗಳೂರಿನಲ್ಲಿ ಮಾರಾಟವಾಗಿವೆ. ಅಂದರೆ 225ನಷ್ಟು ಯೂನಿಟ್‌ಗಳು ಒಂದೇ ನಗರದಲ್ಲಿ ಮಾರಾಟವಾಗಿವೆ.

ಇನ್ನುಳಿದ ಯೂನಿಟ್‌ಗಳನ್ನು ಚೆನ್ನೈ, ಪುಣೆ, ಹೈದರಾಬಾದ್, ಮುಂಬೈ, ಕೊಚ್ಚಿ, ನವದೆಹಲಿ ನಗರಗಳಲ್ಲಿ ಮಾರಾಟ ಮಾಡಲಾಗುವುದು. ಚೆನ್ನೈನಲ್ಲಿ
22 ಯೂನಿಟ್‌ಗಳನ್ನು ಮಾರಾಟ ಮಾಡಲಾಗಿದ್ದರೆ, 20 ಯೂನಿಟ್‌ಗಳನ್ನು ಪುಣೆ ಹಾಗೂ ಹೈದರಾಬಾದ್‌ಗಳಲ್ಲಿ ಮಾರಾಟ ಮಾಡಲಾಗಿದೆ.
 
ಸ್ಕೋಡಾ ಆಕ್ಟೇವಿಯಾ ಆರ್‌ಎಸ್ 245 ಕಾರಿನ ಬಗ್ಗೆ ಮತ್ತಷ್ಟು ತಿಳಿದುಕೊಳ್ಳಲು ಈ ವೀಡಿಯೊ ನೋಡಿ.

Category

🗞
News

Recommended