• 4 years ago
ಇಟಲಿ ಮೂಲದ ಸೂಪರ್ ಕಾರು ತಯಾರಕ ಕಂಪನಿಯಾದ ಲ್ಯಾಂಬೊರ್ಗಿನಿ ತನ್ನ ಹುರಾಕನ್ ಇವೊ ರಿಯರ್-ವೀಲ್ ಡ್ರೈವ್ ಸ್ಪೈಡರ್ ಅನ್ನು ವರ್ಚುವಲ್ ಮೂಲಕ ಬಿಡುಗಡೆಗೊಳಿಸಿದೆ. ಇದೇ ಮೊದಲ
ಬಾರಿಗೆ ಕಾರೊಂದನ್ನು ವರ್ಚುವಲ್ ಮೂಲಕ ಬಿಡುಗಡೆಗೊಳಿಸಲಾಗಿದೆ.

ಲ್ಯಾಂಬೊರ್ಗಿನಿ ಹುರಾಕನ್ ಇವೊ ರಿಯರ್-ವೀಲ್ ಡ್ರೈವ್ ಸ್ಪೈಡರ್ ಅನ್ನು ಲೈಫ್ ಸ್ಟೈಲ್‌ಗೆ ತಕ್ಕಂತೆ ವಿನ್ಯಾಸಗೊಳಿಸಲಾಗಿದೆ. ಈ ಸೂಪರ್ ಕಾರು ಹೊಸ ಫ್ರಂಟ್ ಸ್ಪ್ಲಿಟರ್ ಹಾಗೂ ದೊಡ್ಡ
ಫ್ರೇಮ್‌ನ ಏರ್ ಡ್ಯಾಮ್‌ಗಳನ್ನು ಹೊಂದಿದೆ. ಈ ಕಾರು ಹೈ ಗ್ಲಾಸ್ ಬ್ಲ್ಯಾಕ್‌ ಬಣ್ಣದ ರೇರ್ ಬಂಪರ್ ಹೊಂದಿದೆ. ಈ ಬಂಪರ್ ಹುರಾಕನ್ ಇವೊಗೆ
ವಿಶಿಷ್ಟವಾದ ಹೊಸ ಡಿಫ್ಯೂಸರ್ ಅನ್ನು ನೀಡುತ್ತದೆ.

Category

🗞
News

Recommended