• 4 years ago
ಯಮಹಾ ಕಂಪನಿಯು ಆಸ್ಟ್ರಿಯಾ ರೇಸಿಂಗ್ ಟೀಂ ವೈಝ‍‍ಡ್ಎಫ್ ಆರ್6 ಬೈಕಿನ 20ನೇ ಆನಿವರ್ಸರಿ ಹಿನ್ನೆಲೆಯಲ್ಲಿ ಸ್ಪೆಷಲ್ ಎಡಿಷನ್ ಮಾದರಿಯನ್ನು ಬಿಡುಗಡೆಗೊಳಿಸಿದೆ. ವೈಝ‍‍ಡ್ಎಫ್ ಆರ್6 ಬೈಕ್ 20 ವರ್ಷಗಳ ಪೂರ್ಣಗೊಳಿಸಿದ ಕಾರಣಕ್ಕೆ ಕಳೆದ ವರ್ಷ ಜಪಾನ್‌ನಲ್ಲಿ ಈ ಸ್ಪೆಷಲ್ ಎಡಿಷನ್ ಅನ್ನು ಮೊದಲ ಬಾರಿಗೆ ಅನಾವರಣಗೊಳಿಸಲಾಗಿತ್ತು.

ಆಸ್ಟೀಯಾದಲ್ಲಿ ಬಿಡುಗಡೆಗೊಳಿಸಿದ ಸ್ಪೆಷಲ್ ಎಡಿಷನ್ ಮಾದರಿಯ ಬೆಲೆಯು ಸರಿ ಸುಮಾರು ರೂ.16.91 ಲಕ್ಷಗಳಾಗಿದೆ. ಇದು ಬೃಹತ್ ಪ್ರೀಮಿಯಂ ಮಾದರಿಯ ಬೈಕ್ ಆಗಿದೆ. ಮೊದಲ ತಲೆಮಾರಿನ ಯಮಹಾ ವೈಝ‍‍ಡ್ಎಫ್ ಆರ್6 ಬೈಕನ್ನು 1999ರಲ್ಲಿ ಮೊದಲ ಬಾರಿಗೆ ಬಿಡುಗಡೆಗೊಳಿಸಲಾಗಿತ್ತು. ನಂತರ ಅದೇ ಸರಣಿಯ ವೈಝ‍‍ಡ್ಎಫ್ ಆರ್1 ಮಾದರಿಯನ್ನು ಬಿಡುಗಡೆಗೊಳಿಸಲಾಗಿತ್ತು.

Category

🗞
News

Recommended