ದೇಶಾದ್ಯಂತ ಏಪ್ರಿಲ್ 1ರಿಂದ ಬಿಎಸ್ 6 ಮಾಲಿನ್ಯ ನಿಯಮಗಳು ಜಾರಿಗೆ ಬಂದಿವೆ. ಬಿಎಸ್ 6 ವಾಹನಗಳನ್ನು ಸುಲಭವಾಗಿ ಗುರುತಿಸಲು ಆ ವಾಹನಗಳಲ್ಲಿ ಹಸಿರು ಸ್ಟಿಕ್ಕರ್‌ಗಳನ್ನು ಅಳವಡಿಸಲಾಗುವುದು. ಇದು ಬಿಎಸ್ 6 ವಾಹನಗಳಿಗೆ ವಿಶಿಷ್ಟವಾದ ಗುರುತನ್ನು ನೀಡಲಿದೆ. ಈ ವರ್ಷದ ಅಕ್ಟೋಬರ್ 1ರಿಂದ ಈ ನಿಯಮ ಜಾರಿಗೆ ಬರಲಿದೆ.
ಬಿಎಸ್ 6 ವಾಹನಗಳ ನಂಬರ್ ಪ್ಲೇಟ್‌ನಲ್ಲಿ ಹಸಿರು ಸ್ಟಿಕ್ಕರ್ ಅಳವಡಿಸುವುದು ಕಡ್ಡಾಯ ಎಂದು ಕೇಂದ್ರ ಸಾರಿಗೆ ಹಾಗೂ ಹೆದ್ದಾರಿ ಇಲಾಖೆಯ ಆದೇಶದಲ್ಲಿ ಹೇಳಲಾಗಿದೆ. 1 ಸೆಂ.ಮೀನ ಈ ಸ್ಟಿಕ್ಕರ್ ಅನ್ನು ತ್ರಿಚಕ್ರ ಹಾಗೂ ನಾಲ್ಕು ಚಕ್ರ ವಾಹನಗಳ ವಿಂಡ್‌ಶೀಲ್ಡ್ ಒಳಗೆ ಹಾಗೂ ದ್ವಿಚಕ್ರ ವಾಹನ ನಂಬರ್ ಪ್ಲೇಟ್‌ಗಳಲ್ಲಿ ಅಳವಡಿಸಬಹುದು.
ಮೋಟಾರು ವಾಹನ ಕಾಯ್ದೆ 2018ರಡಿಯಲ್ಲಿರುವ ಹೈ ಸೆಕ್ಯುರಿಟಿ ರಿಜಿಸ್ಟ್ರೇಷನ್ ಪ್ಲೇಟ್ ನಿಯಮಗಳಿಗೆ ತಿದ್ದುಪಡಿ ಮಾಡುವ ಮೂಲಕ ಈ ಆದೇಶವನ್ನು ತರಲಾಗಿದೆ. ಬಿಎಸ್ 6 ಪೆಟ್ರೋಲ್ ಹಾಗೂ ಸಿಎನ್‌ಜಿ ವಾಹನಗಳಿಗೆ ತಿಳಿ ನೀಲಿ ಬಣ್ಣದ ಹಾಗೂ ಡೀಸೆಲ್ ವಾಹನಗಳಿಗೆ ಆರೆಂಜ್ ಬಣ್ಣದ ಸ್ಟಿಕ್ಕರ್ ಅಳವಡಿಸಲಾಗುವುದು.

Category
🗞
News