• 4 years ago
ಬಿಎಂಡಬ್ಲ್ಯು ಇಂಡಿಯಾ ತನ್ನ 2020ರ ಎಕ್ಸ್ 6 ಎಸ್‌ಯುವಿಯನ್ನು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿದೆ. 2020ರ ಹೊಸ ಬಿಎಂಡಬ್ಲ್ಯು ಎಕ್ಸ್ 6 ಎಸ್‌ಯುವಿಯನ್ನು ಎಕ್ಸ್‌ಲೈನ್ ಹಾಗೂ ಎಂ ಸ್ಪೋರ್ಟ್ ಎಂಬ ಎರಡು ಮಾದರಿಗಳಲ್ಲಿ ಮಾರಾಟ ಮಾಡಲಾಗುತ್ತದೆ. ಈ ಮಾದರಿಗಳ ಬೆಲೆ ಭಾರತದ ಎಕ್ಸ್ ಶೋರೂಂ ದರದಂತೆ ರೂ.95 ಲಕ್ಷಗಳಾಗಿದೆ.

2020ಬಿಎಂಡಬ್ಲ್ಯು ಎಕ್ಸ್ 6 ಎಸ್‌ಯುವಿಯನ್ನು ಸಿಬಿಯು ರೂಪದಲ್ಲಿ ದೇಶಿಯ ಮಾರುಕಟ್ಟೆಗೆ ಆಮದು ಮಾಡಿಕೊಳ್ಳಲಾಗುತ್ತದೆ. ಈ ಎಸ್‌ಯುವಿಯ ಬುಕ್ಕಿಂಗ್‌ಗಳನ್ನು ದೇಶದಾದ್ಯಂತವಿರುವ ಮಾರಾಟಗಾರರಲ್ಲಿ ಹಾಗೂ ಕಂಪನಿಯ ಆನ್‌ಲೈನ್ ಪ್ಲಾಟ್‌ಫಾರಂನಲ್ಲಿ ಆರಂಭಿಸಲಾಗಿದೆ. ಈ ಎಸ್‌ಯುವಿಯ ವಿತರಣೆಯನ್ನು ಶೀಘ್ರದಲ್ಲೇ ಆರಂಭಿಸಲಾಗುತ್ತದೆ.

Category

🗞
News

Recommended