• 4 years ago
ರಾಯಲ್ ಎನ್‌ಫೀಲ್ಡ್ ಕಂಪನಿಯು ದೇಶಾದ್ಯಂತವಿರುವ ತನ್ನ 90%ಗೂ ಅಧಿಕ ಶೋರೂಂಗಳಲ್ಲಿ ಕಾರ್ಯಾಚರಣೆಯನ್ನು ಪುನರಾರಂಭಿಸಿರುವುದಾಗಿ ತಿಳಿಸಿದೆ. ಈ ಎಲ್ಲಾ ಶೋರೂಂಗಳಲ್ಲಿ ಹಂತಹಂತವಾಗಿ ಸೇಲ್ಸ್ ಹಾಗೂ ಸರ್ವೀಸ್‌ಗಳನ್ನು ಪುನರಾರಂಭಿಸಲಾಗಿದೆ ಎಂದು ಕಂಪನಿ ಹೇಳಿದೆ. ಇವುಗಳಲ್ಲಿ ದೇಶಾದ್ಯಂತವಿರುವ 850 ಮಳಿಗೆಗಳು ಹಾಗೂ 425 ಸ್ಟುಡಿಯೋಗಳು ಸೇರಿವೆ.

ಎಲ್ಲಾ ಶೋರೂಂಗಳು ಪೂರ್ಣ ಪ್ರಮಾಣದಲ್ಲಿ ಕಾರ್ಯನಿರ್ವಹಿಸುತ್ತಿರುವುದಾಗಿ ಕಂಪನಿ ಹೇಳಿದೆ. ಕಂಟೈನ್‌ಮೆಂಟ್ ಜೋನ್ ಹಾಗೂ ಕೋವಿಡ್ - 19 ಹೆಚ್ಚಿನ ಪ್ರಮಾಣದಲ್ಲಿ ಹರಡಿರುವ ಪ್ರದೇಶಗಳಲ್ಲಿರುವ ಶೋರೂಂಗಳಲ್ಲಿ ಪರ್ಯಾಯ ದಿನಗಳಲ್ಲಿ ಸೀಮಿತ ಕಾರ್ಯಾಚರಣೆ ನಡೆಸಲಾಗುತ್ತಿದೆ.

ಎಲ್ಲಾ ಶೋರೂಂಗಳಲ್ಲಿಯೂ ಸುರಕ್ಷತೆ ಹಾಗೂ ಸಾಮಾಜಿಕ ಅಂತರವನ್ನು ಕಡ್ಡಾಯವಾಗಿ ಪಾಲಿಸುವಂತೆ ಸೂಚಿಸಲಾಗಿದೆ. ಇದರಿಂದ
ಸಿಬ್ಬಂದಿ ಹಾಗೂ ಗ್ರಾಹಕರ ಸುರಕ್ಷತೆಗೆ ಆದ್ಯತೆ ನೀಡಿದಂತಾಗುತ್ತದೆ.

Category

🗞
News

Recommended