• 4 years ago
ಜರ್ಮನ್ ಮೂಲದ ಕಾರು ತಯಾರಕ ಕಂಪನಿಯಾದ ಆಡಿ ತನ್ನ ಎರಡನೇ ತಲೆಮಾರಿನ ಎ7 ಕಾರ್ ಅನ್ನು ಭಾರತದಲ್ಲಿ ಬಿಡುಗಡೆಗೊಳಿಸಲು ಸಜ್ಜಾಗಿದೆ. ಜುಲೈ ತಿಂಗಳಿನಲ್ಲಿ ಆರ್‌ಎಸ್ 7 ಮಾದರಿಯನ್ನು ಬಿಡುಗಡೆಗೊಳಿಸುವ ನಿರೀಕ್ಷೆಗಳಿವೆ. ಆಡಿ ಕಂಪನಿಯು ತನ್ನ ದೇಶೀಯ ವೆಬ್‌ಸೈಟ್‌ನಲ್ಲಿ ಈ ಕಾರಿನ ಟೀಸರ್ ಅನ್ನು ಬಿಡುಗಡೆಗೊಳಿಸಿದೆ.

ಮೊದಲ ತಲೆಮಾರಿನ ಆರ್‌ಎಸ್ 7 ಮಾದರಿ ಕಾರುಗಳು ಹೆಚ್ಚು ಬಲಶಾಲಿಯಾಗಿದ್ದವು. ಎರಡನೇ ತಲೆಮಾರಿನ ಮಾದರಿಯ ಕಾರುಗಳು ಸಹ ಇದನ್ನು ಮುಂದುವರೆಸುವ ಸಾಧ್ಯತೆಗಳಿವೆ. ಹೊಸ ಕಾರಿನಲ್ಲಿ 4.0 ಲೀಟರಿನ ಟ್ವಿನ್ ಟರ್ಬೊ ವಿ8 ಪೆಟ್ರೋಲ್ ಎಂಜಿನ್ ಅಳವಡಿಸಲಾಗಿದೆ. ಈ ಎಂಜಿನ್ ಅನ್ನು 48ವಿ ಮೈಲ್ಡ್ ಹೈಬ್ರಿಡ್ ಸಿಸ್ಟಂಗೆ ಜೋಡಿಸಲಾಗಿದೆ.

ಈ ಎಂಜಿನ್ 600 ಬಿಹೆಚ್‌ಪಿ ಪವರ್ ಹಾಗೂ 800 ಎನ್‌ಎಂ ಟಾರ್ಕ್ ಉತ್ಪಾದಿಸುತ್ತದೆ. ಮೊದಲ ತಲೆಮಾರಿನ ಮಾದರಿಯು 560 ಬಿಹೆಚ್‌ಪಿ ಪವರ್ ಹಾಗೂ
700 ಎನ್‌ಎಂ ಟಾರ್ಕ್ ಉತ್ಪಾದಿಸುತ್ತಿತ್ತು.

Category

🗞
News

Recommended