• 4 years ago
ಬ್ರಿಟಿಷ್ ಮೂಲದ ಬೈಕ್ ತಯಾರಕ ಕಂಪನಿಯಾದ ಟ್ರಯಂಫ್ ಮೋಟರ್‌ಸೈಕಲ್ಸ್, ಹೊಸ ಟೈಗರ್ 900 ಅಡ್ವೆಂಚರ್-ಟೂರರ್ ಬೈಕ್ ಅನ್ನು ಬಿಡುಗಡೆಗೊಳಿಸಿದೆ.
ಈ ಬೈಕಿನ ಬೆಲೆ ಭಾರತದ ಎಕ್ಸ್‌ ಶೋರೂಂ ದರದಂತೆ 13.70 ಲಕ್ಷ ರೂಪಾಯಿಗಳಾಗಿದೆ.

ಹೊಸ ವಿನ್ಯಾಸವನ್ನು ಹೊಂದಿರುವ ಟೈಗರ್ 900 ಬೈಕ್ ಹಳೆ ಬೈಕಿಗಿಂತ ಹೆಚ್ಚು ಅಗ್ರೇಸಿವ್ ಲುಕ್ ಹೊಂದಿದೆ. ಈ ಬೈಕ್ ಇಂಟಿಗ್ರೇಟೆಡ್ ಎಲ್ಇಡಿ ಡಿಆರ್‌ಎಲ್, ಹೊಸ ಎಲ್ಇಡಿ ಹೆಡ್ಲ್ಯಾಂಪ್ ಹಾಗೂ ಬ್ಲೂಟೂತ್ ಕನೆಕ್ಟಿವಿಟಿ ಹೊಂದಿರುವ ಹೊಸ ಟಿಎಫ್‌ಟಿ ಇನ್ಸ್‌ಟ್ರೂಮೆಂಟ್ ಕ್ಲಸ್ಟರ್‌ಗಳನ್ನು ಹೊಂದಿದೆ.

ಟಿಎಫ್‌ಟಿ ಡಿಸ್‌ಪ್ಲೇಯಿಂದಾಗಿ ಬೈಕ್ ಸವಾರರು ಮೊಬೈಲ್ ಕಾಲ್‌ಗಳನ್ನು ಅಟೆಂಡ್ ಮಾಡಲು, ಎಸ್‌ಎಂ‌ಎಸ್‌ಗಳನ್ನು ಓದಲು ಹಾಗೂ ನ್ಯಾವಿಗೇಷನ್ ಫೀಚರ್‌ಗಳನ್ನು ಬಳಸಲು ಸಾಧ್ಯವಾಗಲಿದೆ.

Category

🗞
News

Recommended