• 4 years ago
ಜರ್ಮನಿ ಮೂಲದ ಕಾರು ತಯಾರಕ ಕಂಪನಿಯಾದ ಮರ್ಸಿಡಿಸ್ ಬೆಂಝ್, 2021ರ ಇ 63 ಫೇಸ್‌ಲಿಫ್ಟ್ ಮಾದರಿಯನ್ನು ಅನಾವರಣಗೊಳಿಸಿದೆ. ಎಎಂಜಿ ಇ 63 ಕಾರ್ ಅನ್ನು ಸೆಡಾನ್ ಹಾಗೂ ಎಸ್ಟೇಟ್ ಬಾಡಿ ಸ್ಟೈಲ್‌ಗಳಲ್ಲಿ ಮಾರಾಟ ಮಾಡಲಾಗುತ್ತದೆ.

ಈ ಕಾರು ಎಲೆಕ್ಟ್ರಾನಿಕ್ ಪ್ಯಾಕೇಜ್‌ನೊಂದಿಗೆ ವಿನ್ಯಾಸದ ಟ್ವೀಕ್‌ಗಳನ್ನು ಒಳಗೊಂಡಿದೆ. ದೇಶೀಯ ಮಾರುಕಟ್ಟೆಯಲ್ಲಿ ಇ 63 ಎಸ್ ಮಾದರಿಯನ್ನು ಮಾತ್ರ ಬಿಡುಗಡೆಗೊಳಿಸಲಾಗುತ್ತದೆ. ಈ ಕಾರಿನ ಮುಂಭಾಗದ ತುದಿಯನ್ನು ಹೊಸ ಎಎಂಜಿ-ಜಿಟಿ ಆಧಾರಿತವಾದ ಪ್ಯಾನ್-ಅಮೆರಿಕಾನಾ ಗ್ರಿಲ್‌ನೊಂದಿಗೆ ಅಪ್‌ಡೇಟ್ ಮಾಡಲಾಗಿದೆ.

ಈ ಕಾರಿನ ಸುತ್ತಲೂ ಹೊಸ ಎಲ್‌ಇಡಿ ಹೆಡ್‌ಲೈಟ್‌ಗಳಿವೆ. ಎರಡೂ ತುದಿಗಳಲ್ಲಿ ದೊಡ್ಡ ಗಾತ್ರದ ಏರ್ ಡ್ಯಾಮ್‌ಗಳನ್ನು ನೀಡಲಾಗಿದೆ. ಹೊಸ ಇ 63 ಕಾರಿನ ಪ್ರೊಫೈಲ್ ಹಳೆಯ ಕಾರ್ ಅನ್ನು ಹೋಲುತ್ತದೆ. ಹೊಸ ಕಾರು 20-ಇಂಚಿನ ಅಲಾಯ್ ವ್ಹೀಲ್‌ಗಳನ್ನು ಹೊಂದಿದೆ.

Category

🗞
News

Recommended