ಸಿಎನ್‌ಜಿ ಎಂಜಿನ್‌ನಿಂದ ಚಲಾಯಿಸಲಾಗುವ 2020ರ ಸ್ಕೋಡಾ ಆಕ್ಟೇವಿಯಾ ಕಾರ್ ಅನ್ನು ಯುರೋಪಿಯನ್ ಮಾರುಕಟ್ಟೆಯಲ್ಲಿ ಅನಾವರಣಗೊಳಿಸಲಾಗಿದೆ. ಜೆಕ್ ಮೂಲದ ಕಾರು ತಯಾರಕ ಕಂಪನಿಯಾದ ಸ್ಕೋಡಾ ತನ್ನ ಹೊಸ ತಲೆಮಾರಿನ ಕಾರ್ ಅನ್ನು ಮುಂದಿನ ವರ್ಷದ ಫೆಬ್ರವರಿಯಲ್ಲಿ ಭಾರತದಲ್ಲಿ ಬಿಡುಗಡೆಗೊಳಿಸಲಿದೆ.
ಆಕ್ಟೇವಿಯಾ ಕಾರಿನ ಈ ಸಿಎನ್‌ಜಿ ಮಾದರಿಗೆ ಜಿ-ಟೆಕ್ ಎಂಬ ಹೆಸರನ್ನಿಡಲಾಗಿದೆ. ಜಿ-ಟೆಕ್ ಸಿಎನ್‌ಜಿ ಮಾದರಿಯನ್ನು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸುವ ಬಗ್ಗೆ ಸ್ಕೋಡಾ ಕಂಪನಿಯು ಯಾವುದೇ ಮಾಹಿತಿಯನ್ನು ನೀಡಿಲ್ಲ.
ಆಕ್ಟೇವಿಯಾ ಜಿ-ಟೆಕ್ ಕಾರಿನಲ್ಲಿ 1.5-ಲೀಟರಿನ ಟಿಎಸ್ಐ ಎಂಜಿನ್ ಅಳವಡಿಸಲಾಗಿದೆ. ಈ ಎಂಜಿನ್ 129 ಬಿಹೆಚ್ ಪಿ ಪವರ್ ಉತ್ಪಾದಿಸುತ್ತದೆ. ಈ ಕಾರು ಸಿಎನ್‌ಜಿ ಮೋಡ್ ನಲ್ಲಿದ್ದಾಗ ಪ್ರತಿ ಕೆಜಿಗೆ 27.77 ಕಿ.ಮೀ ಮೈಲೇಜ್ ನೀಡುತ್ತದೆ ಎಂದು ಕಂಪನಿ ಹೇಳಿಕೊಂಡಿದೆ.

Category
🗞
News