• 4 years ago
ಡುಕಾಟಿ ಕಂಪನಿಯು ಈ ವರ್ಷದ ಏಪ್ರಿಲ್‌ ತಿಂಗಳಿನಲ್ಲಿ ಪ್ಯಾನಿಗಲ್ ವಿ2 ಬೈಕಿನ ಟೀಸರ್ ಬಿಡುಗಡೆಗೊಳಿಸಿತ್ತು. ಟೀಸರ್ ಬಿಡುಗಡೆಯ ನಂತರ ಬೈಕ್ ಕೂಡ ಶೀಘ್ರದಲ್ಲೇ ಬಿಡುಗಡೆಯಾಗುವುದೆಂದು ನಿರೀಕ್ಷಿಸಲಾಗಿತ್ತು.

ಆದರೆ ಕೋವಿಡ್ -19ನಿಂದಾಗಿ ಈ ಬೈಕಿನ ಬಿಡುಗಡೆಯನ್ನು ಮುಂದೂಡಲಾಯಿತು. ಪ್ಯಾನಿಗಲ್ ವಿ 2 ಡುಕಾಟಿ ಕಂಪನಿಯು ಭಾರತದಲ್ಲಿ ಬಿಡುಗಡೆಗೊಳಿಸುತ್ತಿರುವ ಮೊದಲ ಬಿಎಸ್ 6 ಬೈಕ್ ಆಗಿದೆ.

ಇತ್ತೀಚಿನ ವರದಿಗಳ ಪ್ರಕಾರ ಡುಕಾಟಿ ಕಂಪನಿಯು ಆಗಸ್ಟ್ ಅಂತ್ಯದ ವೇಳೆಗೆ ಪ್ಯಾನಿಗಲ್ ವಿ2 ಬೈಕ್ ಅನ್ನು ಬಿಡುಗಡೆಗೊಳಿಸಲಿದ್ದು, ಸೆಪ್ಟೆಂಬರ್ ನಲ್ಲಿ ವಿತರಣೆಯನ್ನು ಆರಂಭಿಸಲಿದೆ.

Category

🗞
News

Recommended