• 4 years ago
ಡೆಟೆಲ್ ಎಲೆಕ್ಟ್ರಿಕ್ ಮೊಬಿಲಿಟಿ, ಭಾರತದ ಅತಿ ಕಡಿಮೆ ಬೆಲೆಯ ಎಲೆಕ್ಟ್ರಿಕ್ ಮೊಪೆಡ್, ಈಸಿಯನ್ನು ಬಿಡುಗಡೆಗೊಳಿಸಿದೆ. ಈ ಎಲೆಕ್ಟ್ರಿಕ್ ಮೊಪೆಡ್‌ನ ಬೆಲೆ ರೂ.19,999ಗಳಾಗಿದೆ. ಈ ಎಲೆಕ್ಟ್ರಿಕ್ ಮೊಪೆಡ್‌ನ ಟಾಪ್ ಸ್ಪೀಡ್ ಪ್ರತಿ ಗಂಟೆಗೆ 25 ಕಿ.ಮೀಗಳಾಗಿರುವುದರಿಂದ ಈ ಮೊಪೆಡ್ ಅನ್ನು ರಿಜಿಸ್ಟರ್ ಇಲ್ಲದೆ ಚಲಾಯಿಸಬಹುದು.

ಡೆಟೆಲ್ ಎಲೆಕ್ಟ್ರಿಕ್ ಮೊಬಿಲಿಟಿ ಕಂಪನಿಯು 2017ರಲ್ಲಿ ಸ್ಥಾಪನೆಯಾಯಿತು. ಇದಕ್ಕೂ ಮುನ್ನ ಕಂಪನಿಯು ಹಲವಾರು ಉತ್ಪನ್ನಗಳನ್ನು ಬಿಡುಗಡೆಗೊಳಿಸಿತ್ತು. ಡೆಟೆಲ್ ವಿಶ್ವದ ಅಗ್ಗದ ಎಲ್ಇಡಿ ಟೆಲಿವಿಷನ್ ಅನ್ನು ಕೇವಲ ರೂ.4,000ಗಳಿಗೆ ಬಿಡುಗಡೆಗೊಳಿಸಿತ್ತು. ಇದರ ಜೊತೆಗೆ ಕಂಪನಿಯು ರೂ.299ಗಳಲ್ಲಿ ವಿಶ್ವದ ಅಗ್ಗದ ಫೀಚರ್ ಫೋನ್ ಅನ್ನು ಸಹ ಬಿಡುಗಡೆಗೊಳಿಸಿತ್ತು.

ಡೆಟೆಲ್ ಎಲೆಕ್ಟ್ರಿಕ್ ಮೊಪೆಡ್ ಕೈಗೆಟಕುವ ಬೆಲೆಯನ್ನು ಹೊಂದಿದ್ದು, ಸಾಕಷ್ಟು ಉಪಯುಕ್ತವಾಗಿದೆ. ಈ ಮೊಪೆಡ್ ಅನ್ನು ಕಚೇರಿ, ಶಾಪಿಂಗ್ ಅಥವಾ ಸಿಟಿಯೊಳಗಿನ ಪ್ರಯಾಣಕ್ಕಾಗಿ ಬಳಸಬಹುದು.

Category

🚗
Motor

Recommended