Vasu hotel is very famous in Kanakapura, Ramanagara district. Masala dosa is identity for this hotel & Other snacks also good. Plan this weekend with your family.
ಕನಕಪುರದ ವಾಸು ಹೋಟೆಲ್ ಮಸಾಲೆ ದೋಸೆ ವರ್ಲ್ಡ್ ಫೇಮಸ್! "ನೀವು ಕನಕಪುರಕ್ಕೆ ಹೋಗಿದ್ರಾ? ಹಾಗಿದ್ದರೆ ವಾಸು ಹೋಟೆಲ್ ಗೆ ಹೋಗಿದ್ರಾ?" ಎಂಬುದು ಆ ಹೋಟೆಲ್ ಬಗ್ಗೆ ಗೊತ್ತಿರುವವರ ಪ್ರಶ್ನೆಯಾಗಿತ್ತು. ಅಲ್ಲಿ ಏನು ವಿಶೇಷ ಅಂತ ಕೇಳಿದರೆ, ಮಸಾಲೆ ದೋಸೆ ಎಂಬ ಉತ್ತರ ಬರುತ್ತಿತ್ತು. ಬೆಂಗಳೂರಿನಲ್ಲಿ ಸಿಗದ ಮಸಾಲೆ ದೋಸೆ ಅಲ್ಲೇನು ಮಾಡ್ತಾರೆ ಅನ್ನೋ ಧೋರಣೆಯಿಂದಲೇ ಪುಟ್ಟದಾಗಿರುವ ಜಾಗದಿಂದ ಒಳಗೆ ಹೋದರೆ ಎಲ್ಲೆಲ್ಲೂ ಮಸಾಲೆ ದೋಸೆ.ರಸ್ತೆ ವಿಸ್ತರಣೆ ಕಾರಣಕ್ಕೆ ವಾಸು ಹೋಟೆಲ್ ಸ್ವಲ್ಪ ಚಿಕ್ಕದಾಗಿದೆ. ಊರಿನಲ್ಲಿ ಯಾರನ್ನೇ ಕೇಳಿದರೂ 'ಹೊಸದಾ ಅಥವಾ ಹಳೆಯದಾ' ಅಂತ ಪ್ರಶ್ನೆ ಮಾಡ್ತಾರೆ. ಹಳೆಯದು ಅಂದರೆ, ಮೇನ್ ರೋಡ್ ನಲ್ಲೇ ಇದೆ. ಯಾರನ್ನಾದರೂ ಕೇಳಿದರೆ ಹೇಳ್ತಾರೆ ನೋಡಿ ಎನ್ನುತ್ತಾರೆ. ಹಾಗೆ ಹುಡುಕಿಕೊಂಡು ಒಳಗೆ ಹೋಗಿದ್ದಾಯಿತು.ಮೂವತ್ತೈದು ರುಪಾಯಿಗೆ ಮಸಾಲೆ ದೋಸೆ, ಹೆಚ್ಚು ಕಡಿಮೆ ಅದೇ ಬೆಲೆಗೆ ಖಾಲಿ ದೋಸೆ, ಸೆಟ್ ದೋಸೆ ಕೂಡ ಸಿಗುತ್ತದೆ. ಟೋಕನ್ ತೆಗೆದುಕೊಂಡು ನಿಮಿಷಗಳಲ್ಲಿ, ಹೆಚ್ಚೆಂದರೆ ಹತ್ತು ನಿಮಿಷದೊಳಗೆ ದೋಸೆ- ಚಟ್ನಿ ಕೊಟ್ಟುಬಿಡ್ತಾರೆ. ಆ ನಂತರದ ಕೆಲ ನಿಮಿಷ ಖಂಡಿತವಾಗಿಯೂ ಮೌನಾಚರಣೆ ಇರುತ್ತದೆ. ಏಕೆಂದರೆ ಅದಕ್ಕೆ ಮಸಾಲೆ ದೋಸೆಯ ಸವಿ ಕಾರಣ.

Category
🗞
News