ಮುಂಜಾನೆ 6 ರಿಂದ ರಾತ್ರಿ 10 ರ ವರೆಗೆ ಕಾಂಡೊಮ್ ಜಾಹಿರಾತು ಪ್ರಸಾರವಾಗುವುದಿಲ್ಲ | Oneindia Kannada

  • 7 years ago
ಮಾಹಿತಿ ಹಾಗು ಪ್ರಸಾರ ಸಚಿವಾಲಯ ಭಾರತ ಸರ್ಕಾರದ ಒಂದು ಅಂಗ . ಇದು ಟಿ ವಿ ಹಾಗು ಸಿನಿಮಾ ಗಳಲ್ಲಿ ಏನೆಲ್ಲ ಪ್ರಸಾರವಾಗಬೇಕು ಹಾಗು ಏನೆಲ್ಲ ಪ್ರಸಾರವಾಗಬಾರದು ಎಂದು ನಿರ್ಧರಿಸುತ್ತದೆ . ಈ ತಂಡ ಟಿ ವಿ ಯಲ್ಲಿ ಪ್ರಸಾರವಾಗುವ ನಿರೋದ್ ಜಾಹಿರಾತುಗಳಿಗೆ ಕಡಿವಾಣ ತಂದಿದೆ . ಎಂಮುಂಜಾನೆ ಆರರಿಂದ ತಡ ರಾತ್ರಿ ಹತ್ತು ಗಂಟೆಯ ವರೆಗೆ ಯಾವ ಚಾನೆಲ್ ಕೂಡ ಭಾರತಾದ್ಯಂತ ನಿರೋದ್ ಜಾಹಿರಾತನ್ನು ಪ್ರಸಾರ ಮಾಡುವಂತಿಲ್ಲ ಎಂದು ಘೋಷಿಸಿದೆ . ಇದರ ಹಿಂದಿನ ಉದ್ದೇಶವನ್ನು ಕೇಳಿದರೆ , ಮಕ್ಕಳು ಟಿ ವಿ ನೋಡುವ ಹೊತ್ತಿನಲ್ಲಿ ಇಂತಹ ಪ್ರಚೋದನಕಾರಿ ಅಂಶ ಇರುವ ಯಾವುದೇ ಕಾರ್ಯಕ್ರಮ ಅಥವಾ ಜಾಹಿರಾತು ಪ್ರಸಾರ ಮಾಡುವಂತಿಲ್ಲ ಎಂದು ಸಂಜಾಯಷಿ ನೀಡಿದೆ . ಇದು ಇದೆ ಸೋಮವಾರದಿಂದ ದೇಶದಾದ್ಯಂತ ಜಾರಿಯಾಗಿದೆ .
The ministry of Information and Broadcasting bans Condom ads between 6 AM to 10 PM in India .

Category

🗞
News

Recommended