• 7 years ago
ರವೆ, ಹಾಲು, ಸಕ್ಕರೆ ತುಪ್ಪಗಳ ಸಂಯೋಗದಲ್ಲಿ ತಯಾರಿಸುವ ಈ ಸಿಹಿ ತಿಂಡಿಯನ್ನು ಹಬ್ಬಗಳ ಸಂದರ್ಭದಲ್ಲಿ ಅಥವಾ ಹೆಚ್ಚು ಸಮಯವಿಲ್ಲದ ವೇಳೆಯಲ್ಲಿ ಸುಲಭವಾಗಿ ತಯಾರಿಸಬಹುದು. ಗಂಜಿಯಂತೆ ಹೋಲುವ ಈ ಸಿಹಿ ಖಾದ್ಯ ಸಾಮಾನ್ಯವಾಗಿ ಎಲ್ಲಾ ವಯಸ್ಸಿನವರಿಗೂ ಇಷ್ಟವಾಗುವುದು. ಅಲ್ಲದೆ ಸುಲಭವಾಗಿ ಜೀರ್ಣವಾಗುವುದು. ಇದನ್ನು ಕೆಲವು ಸ್ಥಳಗಳಿಗೆ ತಕ್ಕಂತೆ ವಿವಿಧ ಹೆಸರುಗಳಿಂದ ಕರೆಯುತ್ತಾರೆ. ರವೆ ಪಾಯಸ, ಸೂಜಿ ರವೆ ಪಾಯಸ, ಗೋಧಿರವೆ ಪಾಯಸ ಹೀಗೆ ವಿವಿಧ ಬಗೆಯಲ್ಲಿ ಹೆಸರಿಸುತ್ತಾರೆ. ಬಹಳ ಸುಲಭ ಹಾಗೂ ಸರಳ ವಿಧಾನದಲ್ಲಿ ತಯಾರಿಸಬಹುದಾದ ಈ ಪಾಯಸವನ್ನು ನೀವು ಹಬ್ಬದ ಸಂದರ್ಭದಲ್ಲಿ ತಯಾರಿಸಬೇಕು ಎನ್ನುವ ಹವಣಿಕೆಯಲ್ಲಿದ್ದರೆ ಈ ಮುಂದೆ ನೀಡಿರುವ ವಿಡಿಯೋ ಹಾಗೂ ಹಂತ ಹಂತವಾದ ಚಿತ್ರ ವಿವರಣೆಯಲ್ಲಿ ವಿವರಿಸಲಾಗಿದೆ.

https://kannada.boldsky.com/

Recommended