• 4 years ago
ಟ್ರಯಂಫ್ ಮೋಟರ್ ಸೈಕಲ್ಸ್ ಕಂಪನಿಯು ತನ್ನ 2020ರ ಹೊಸ ಸ್ಟ್ರೀಟ್ ಟ್ವಿನ್ ಬಿಎಸ್ 6 ಬೈಕ್ ಅನ್ನು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿದೆ. ಹೊಸ ಬೈಕಿನ ಆರಂಭಿಕ ಬೆಲೆ ಭಾರತದ ಎಕ್ಸ್ ಶೋರೂಂ ದರದಂತೆ ರೂ.7.45 ಲಕ್ಷಗಳಾಗಿದೆ.

ಅಪ್​ಡೇಟ್ ಮಾಡಲಾದ ಎಂಜಿನ್ ಹೊರತುಪಡಿಸಿ ಹೊಸ ಬೈಕ್ ಬಿಎಸ್ 4 ಮಾದರಿಯನ್ನು ಹೋಲುತ್ತದೆ.
ಹೊಸ ಸ್ಟ್ರೀಟ್ ಟ್ವಿನ್ ಬೈಕ್ ಅನ್ನು ಜೆಟ್ ಬ್ಲ್ಯಾಕ್, ಮ್ಯಾಟ್ ಐರನ್‌ಸ್ಟೋನ್ ಹಾಗೂ ಕೊರೊಸಿ ರೆಡ್ ಎಂಬ ಮೂರು ಬಣ್ಣಗಳಲ್ಲಿ ಮಾರಾಟ ಮಾಡಲಾಗುತ್ತದೆ. ಜೆಟ್ ಬ್ಲ್ಯಾಕ್ ಹೊರತುಪಡಿಸಿ ಇತರ ಎರಡು ಬಣ್ಣಗಳನ್ನು ಹೊಂದಿರುವ ಬೈಕ್ ಖರೀದಿಗೆ ರೂ.13,000 ಹೆಚ್ಚು ಪಾವತಿಸಬೇಕಾಗುತ್ತದೆ.

Category

🚗
Motor

Recommended